ತೊಡಗಿಸಿಕೊಳ್ಳುವಂಥ ಕ್ಲಾಸ್ ಅಸೈನ್ಮೆಂಟ್ಗಳನ್ನು ಸೃಷ್ಟಿಸಲು ನಿಮ್ಮ ಮೂರು-ಹಂತಗಳ ಮಾರ್ಗದರ್ಶಿ

 

 

ಸಂತೋಷಭರಿತರಾಗಿ, ನೀವು ಹೇಳುತ್ತಿರುವ ಪ್ರತಿಯೊಂದೂ ಪದವನ್ನು ಆಲಿಸುತ್ತಾ, ಭವಿಷ್ಯಕ್ಕೆ ಸಿದ್ಧರಾಗಿರುವ ವಿದ್ಯಾರ್ಥಿಗಳಿಂದ ಕೂಡಿದ ತರಗತಿಯನ್ನು ನಾವೆಲ್ಲರೂ ಬಯಸುತ್ತೇವೆ. ಪಠ್ಯ ಯೋಜನೆಯೊಂದರ ಒಂದು ಪ್ರಮುಖ ವಿಷಯವು ಕ್ಲಾಸ್ ಅಸೈನ್ಮೆಂಟ್ ಆಗಿರುತ್ತದೆ. ಅದು ತರಗತಿಯ ಸಂದರ್ಭದಲ್ಲಿ ಮಾಡುವ ಗ್ರುಪ್ ಆ್ಯಕ್ಟಿವಿಟಿಯಾಗಿರಲಿ ಅಥವಾ ಹೋಮ್ವರ್ಕ್ ಆಗಿರಲಿ – ಪ್ರತಿಯೊಂದು ಅಸೈನ್ಮೆಂಟ್ ತನ್ನೊಂದಿಗೆ ಕಲಿಕಾ ಗುರಿಯೊಂದನ್ನು ಹೊಂದಿರುತ್ತದೆ.

ಹಾಗಾದರೆ, ನೀವು ನೀಡುವ ಪ್ರತಿಯೊಂದೂ ಅಸೈನ್ಮೆಂಟ್ ಅನ್ನು ನಿಮ್ಮ ತರಗತಿಗೆ ತೊಡಗಿಸಿಕೊಳ್ಳುವುದಾಗಿರುವಂತೆ ಮಾಡುವುದು ಹೇಗೆ?

ಹಂತ 1: ನಿಮ್ಮ ವಿದ್ಯಾರ್ಥಿಗಳಿಗೆ ಲಭ್ಯವಿರುವ ಆಯ್ಕೆಗಳನ್ನು ಸಮರ್ಪಕಗೊಳಿಸಿ

ವಿಶೇಷವಾಗಿ, ಪರಿಶ್ರಮಪಡುವುದಕ್ಕಾಗಿ ವಿದ್ಯಾರ್ಥಿಗಳನ್ನು ಅಂತಸ್ಸಹಜತೆಯಿಂದ ಪ್ರೇರೇಪಿಸಲು, ಆಯ್ಕೆ ಮಾಡುವ ಅವಕಾಶವನ್ನು ಹೊಂದಿರುವುದು ಉತ್ತಮವಾಗಿರುತ್ತದೆ. ಉದಾಹರಣೆಗೆ, ನೀವೊಬ್ಬರೇ ಮಾತನಾಡುತ್ತಿರುವ ತರಗತಿಗಿಂತಲೂ, ತರಗತಿಯ ಸಂದರ್ಭದಲ್ಲಿ ಅವರಿಗೆ ಆಸಕ್ತಿ ಮೂಡಿದ ಮಹಾಗ್ರಂಥವೊಂದರ ಸರಳೀಕರಿಸಿದ ಆವೃತ್ತಿಯನ್ನು ಓದಲು ಹಾಗೂ ನಂತರದಲ್ಲಿ ಪಾತ್ರಗಳನ್ನು ಡಿಕೋಡ್ ಮಾಡಿ, ಹೆಚ್ಚು ಸಂವಾದಾತ್ಮಕ ತರಗತಿಯನ್ನು ರೂಪಿಸುವುದಕ್ಕಾಗಿ Rewordify’s Classic Literature ವಿಭಾಗವನ್ನು ನಿಮ್ಮ ವಿದ್ಯಾರ್ಥಿಗಳು ಬಳಸಬಹುದು.

ಹಂತ 2: “ಇದು ನನಗೆ ಹೇಗೆ ಉಪಯೋಗಕ್ಕೆ ಬರುತ್ತದೆ?” ಎಂಬ ಪ್ರಶ್ನೆಗೆ ಉತ್ತರವನ್ನು ಸಿದ್ಧವಾಗಿಟ್ಟುಕೊಳ್ಳಿ

ನಿಮ್ಮ ವಿದ್ಯಾರ್ಥಿಗಳು ವಾಸ್ತವಿಕವಾಗಿ ತರಗತಿಯಲ್ಲಿ ನಿಮ್ಮನ್ನು ಕೇಳದಿದ್ದರೂ, ಈ ಬಗ್ಗೆ ಅವರು ಖಂಡಿತ ಆಶ್ಚರ್ಯಪಡುತ್ತಿರುತ್ತಾರೆ! ಹಾಗಾಗಿ ಸಂಶಯಗಳಿಗೆ ವಿರಾಮ ನೀಡಿ, ಪ್ರತಿಯೊಂದು ಚಟುವಟಿಕೆಯ ಉದ್ದೇಶವನ್ನು ನಿಮ್ಮ ತರಗತಿಗೆ ತಿಳಿಸಿ. ಅದು ಹಿಂದಿನ ವಿಷಯವನ್ನು ಸಾರಾಂಶೀಕರಿಸಿ, ನೀವು ಕಲಿಸಲಿರುವ ವಿಷಯವು ನಿಮ್ಮಿಂದ ಕಲಿಸಲಾದ ಹಿಂದಿನ ವಿಷಯಕ್ಕೆ ಹೇಗೆ ಸಂಬಂಧಿಸುತ್ತದೆ ಎಂಬುದನ್ನು ತಿಳಿಸುವಷ್ಟು ಸರಳವಾಗಿರಬಹುದು.

ಹಂತ 3: ನಾವೆಲ್ಲರೂ ಸ್ಪರ್ಧಾತ್ಮಕ ಗುಣವನ್ನು ಹೊಂದಿರುತ್ತೇವೆ, ಅದನ್ನೇ ಬಳಸಿಕೊಳ್ಳಿ

ಅಂತಿಮ “ಪುರಸ್ಕಾರ” ದೊಂದಿಗೆ ಸೃಜನಾತ್ಮಕವಾಗುವ ಸ್ವಾತಂತ್ರ್ಯವನ್ನು ಒಬ್ಬ ಶಿಕ್ಷಕರಾಗಿ ನೀವು ಹೊಂದಿರುತ್ತೀರಿ. ಅದು ಬಿಡುವಿನ ಸಮಯದಲ್ಲಿ ಆಟವಾಡಲು ಪಿಸಿಯನ್ನು ಬಳಸಲು ಅನುಮತಿಸುವುದಾಗಿರಬಹುದು (ಖಂಡಿತವಾಗಿ ಮೇಲ್ವಿಚಾರಣೆಯಡಿ) ಅಥವಾ ತರಗತಿಯಲ್ಲಿ ಚಲನಚಿತ್ರವೊಂದನ್ನು ವೀಕ್ಷಿಸುವ ಅವಕಾಶ ನೀಡುವುದಾಗಿರಬಹುದು. ನೀವು ಅವರಿಗೆ ನೀಡುವ ಪ್ರತಿಯೊಂದೂ ಅಸೈನ್ಮೆಂಟ್ನಲ್ಲಿ ಮೋಜಿನಿಂದ ಕೂಡಿದ ಒಂದು ಅಂಶವನ್ನು ಇರಿಸಿ, ಅದರ ಮೇಲೆ ನಿಮ್ಮ ವಿದ್ಯಾರ್ಥಿಗಳು ಎರಡು ಪಟ್ಟು ಪರಿಶ್ರಮಪಡುವುದನ್ನು ಗಮನಿಸಿ!

ನೀವು ತೆಗೆದುಕೊಳ್ಳಬೇಕಿರುವ ಅತಿದೊಡ್ಡ ಸಂದೇಶವೆಂದರೆ, ವಿಷಯಗಳನ್ನು ನೀವು ಬದಲಿಸುತ್ತಿರಬೇಕು ಹಾಗೂ ಪ್ರತಿಯೊಂದು ಪಾಠವನ್ನೂ ಉತ್ಸಾಹಪೂರ್ಣವಾಗಿರುವಂತೆ ಮಾಡಬೇಕು, ನಿಮ್ಮ ಕಲಿಕೆಯನ್ನೂ ಸಹ ಇನ್ನೂ ಹೆಚ್ಚು ಉತ್ತಮಗೊಳಿಸಿಕೊಳ್ಳಲು ಇದು ನಿಮಗೆ ಶಕ್ತಿ ಹಾಗೂ ಸ್ಫೂರ್ತಿಯನ್ನು ನೀಡುತ್ತದೆ. ಏನಿಲ್ಲವೆಂದರೂ, ಅಸೈನ್ಮೆಂಟ್ ಪರಿಧಿಯಾಚೆಗೆ ಹೆಚ್ಚಿಗೆ ಇದ್ದಷ್ಟೂ, ಪರೀಕ್ಷೆಗಾಗಿ ಮತ್ತು ಅದರಾಚೆಗೆ ನಿಮ್ಮ ವಿದ್ಯಾರ್ಥಿಗಳು ಪ್ರತಿಯೊಂದನ್ನೂ ನೆನಪಿಟ್ಟುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.