ವಿದ್ಯಾರ್ಥಿಗಳು ಓದುವುದನ್ನು ಇಷ್ಟಪಡುವಂತೆ ಮಾಡಲು ನಿಮ್ಮ ಮೂರು-ಹಂತಗಳ ಮಾರ್ಗದರ್ಶಿ

 

ಓದುವುದನ್ನು ಇಷ್ಟಪಡುವ ವಿದ್ಯಾರ್ಥಿಗಳು ಇರುವಂತೆಯೇ, ಓದುವುದನ್ನು ತಪ್ಪಿಸಲು ಸಾಧ್ಯವಿರುವ ಪ್ರತಿಯೊಂದನ್ನೂ ಮಾಡಲು ತಯಾರಿರುವ ವಿದ್ಯಾರ್ಥಿಗಳೂ ಇರುತ್ತಾರೆ. ಓದುವಿಕೆಯು ಕಲಿಕೆಯ ಮಹತ್ವದ ಭಾಗವಾಗಿದ್ದು, ಅದನ್ನು ನಿರ್ಲಕ್ಷಿಸಲಾಗದು ಎಂಬುದು ಒಬ್ಬ ಶಿಕ್ಷಕರಾಗಿ ನಿಮಗೆ ತಿಳಿದಿರುತ್ತದೆ. ವಾಸ್ತವದಲ್ಲಿ, ಮಕ್ಕಳು ಓದಲು ಎಷ್ಟು ಮುಂಚಿತವಾಗಿ ತೊಡಗಿಕೊಳ್ಳುತ್ತಾರೆಯೋ ಅವರಿಗೆ ಅಷ್ಟು ಹೆಚ್ಚು ಒಳ್ಳೆಯದು. ಪ್ರಕಟಗೊಂಡ, ಉತ್ತಮವಾಗಿ-ಬರೆಯಲ್ಪಟ್ಟ ಕೆಲಸವು ಒಬ್ಬ ವಿದ್ಯಾರ್ಥಿಯ ಸ್ವಂತದ ಬರವಣಿಗೆ, ಶಬ್ದಭಂಢಾರ ಮತ್ತು ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವಿಕೆಯ ಮೇಲೆ ಗಮನಾರ್ಹ ಪರಿಣಾಮವನ್ನು ಹೊಂದಿರುತ್ತದೆ.[1]

ನಿಮ್ಮ ವಿದ್ಯಾರ್ಥಿಗಳು ಓದುವುದನ್ನು ಇಷ್ಟಪಡುವಂತೆ ಮಾಡಲು, ಈ ಮೂರು-ಹಂತಗಳ ಕ್ರಿಯಾ ಯೋಜನೆಯನ್ನು ಅನುಸರಿಸಿ ಹಾಗೂ ವ್ಯತ್ಯಾಸವನ್ನು ನೋಡಿ.

1) ಆಯ್ಕೆಯನ್ನು ಮಾಡಲು ಬಿಡುವುದು ಉತ್ತಮವಾಗಿರುತ್ತದೆ!

ಪಠ್ಯಕ್ರಮಕ್ಕೆ ಅನುಗುಣವಾಗಿ ತರಗತಿಯಲ್ಲಿ ಅಥವಾ ಮನೆಗೆಲಸಕ್ಕೆ ಯಾವ ಅಧ್ಯಾಯ ಅಥವಾ ಪುಸ್ತಕವನ್ನು ಓದುವುದು ಎಂಬ ಆಯ್ಕೆಯನ್ನು ಮಾಡುವ ಸ್ವಾತಂತ್ರವನ್ನು ನಿಮ್ಮ ವಿದ್ಯಾರ್ಥಿಗಳಿಗೆ ನೀಡಿ. ಹಿಂತೆಗೆದುಕೊಳ್ಳಲು ಇದು ಸ್ವಲ್ಪ ಕಷ್ಟಕರವಾಗಿರಬಹುದು ಆದರೆ ನಿಮ್ಮ ವಿದ್ಯಾರ್ಥಿಗಳು ತಮ್ಮದೇ ಆದ ಕಲಿಕೆಯಲ್ಲಿ ಹೆಚ್ಚು ತೊಡಗಿಕೊಳ್ಳುವಿಕೆಯನ್ನು ಅನುಭವಿಸುವುದರಿಂದ ಈ ಪ್ರಯತ್ನವು ಫಲ ನೀಡುತ್ತದೆ. ಜೋರಾಗಿ ಓದುವುದು ಪ್ರಯತ್ನಿಸಿ ಪರೀಕ್ಷಿಸಲ್ಪಟ್ಟ ಒಂದು ಕಲಿಸುವ ಆಚರಣೆಯಾಗಿದ್ದು, ವರ್ಷಾಂತರಗಳಿಂದ ರೂಢಿಯಲ್ಲಿದೆ, ಹಾಗಾಗಿ ಅದನ್ನು ನಿಮ್ಮ ಪಠ್ಯ ಯೋಜನೆಗಳ ಭಾಗವಾಗಿಸಿಕೊಳ್ಳುವುದನ್ನು ಖಂಡಿತ ಖಚಿತಪಡಿಸಿಕೊಳ್ಳಿ.

2) ಅದನ್ನು ಒಂದು ಸಮೂಹ ಚಟುವಟಿಕೆಯನ್ನಾಗಿ ಪರಿವರ್ತಿಸಿ

ಓದುವಿಕೆಯನ್ನು ವಾರಕ್ಕೊಮ್ಮೆ ಕೈಗೊಳ್ಳಲಾಗುವ ಒಂದು ಚಟುವಟಿಕೆಯನ್ನಾಗಿ ಮಾಡಲು ನೀವು ಅದನ್ನು ಒಂದು ರೀಡಿಂಗ್ ಕ್ಲಬ್ ಎಂದು ಕರೆಯಬಹುದು ಅಥವಾ ಅದೇ ರೀತಿಯಾಗಿ ಹೆಸರಿಸಬಹುದು, ಇದರಲ್ಲಿ ವಿದ್ಯಾರ್ಥಿಗಳು ತಾವು ಈಗಷ್ಟೇ ಓದಿ ಮುಗಿಸಿದ ಪುಸ್ತಕ ಅಥವಾ ಅದರ ವೀಕ್ಷಿಸಿದ ಚಲನಚಿತ್ರದ ಆವೃತ್ತಿಯನ್ನು ಚರ್ಚಿಸಲಿ – ಇದು ಅವರನ್ನು ಜವಾಬ್ದಾರಿಯುತ ಮತ್ತು ಹೊಣೆಗಾರ ವ್ಯಕ್ತಿಗಳನ್ನಾಗಿಸುತ್ತದೆ. ನಿಗದಿತವಾಗಿ ಓದುವಿಕೆಯು ವಾಸ್ತವದಲ್ಲಿ ಒಂದು ದೊಡ್ಡ ಪ್ರೋತ್ಸಾಹಕವೂ ಆಗಿರುತ್ತದೆ.

3) ವಿದ್ಯಾರ್ಥಿಗಳು ಮಹಾನ್ ಕಥೆಗಾರರು

ಕತೆಪುಸ್ತಕವೊಂದನ್ನು ಸೃಷ್ಟಿಸಲು ಬಳಕೆದಾರರು ಒಬ್ಬ ನಿರ್ದಿಷ್ಟ ಕಲಾವಿದನ ಕಲಾತ್ಮಕ ಕೆಲಸವನ್ನು ಆಯ್ಕೆ ಮಾಡಬಹುದು, ನಂತರ ಅದಕ್ಕೆ ಪಠ್ಯವನ್ನು ಸೇರಿಸಬಹುದು... ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಬರವಣಿಗೆಯನ್ನು ಮಾಡಬಹುದಾದಂಥ ಅತ್ಯುತ್ತಮ ಸ್ಥಳಗಳಿಗೆ ನಾನು ಸೈಟ್ ಅನ್ನು ಸೇರಿಸುತ್ತಿದ್ದೇನೆ.”

ಲ್ಯಾರಿ ಫರ್ಲಾಝೋ

ಶಿಕ್ಷಕ, ಲೇಖಕ, ಬ್ಲಾಗರ್

ಸ್ಟೋರಿಬರ್ಡ್ ನೊಂದಿಗೆ ನಿಮ್ಮ ವಿದ್ಯಾರ್ಥಿಗಳಲ್ಲಿ ಅಡಗಿರುವ ಕತೆಗಾರನನ್ನು ಹೊರತರಲು ಬಿಡಿ. ಬಳಸಲು ಉಚಿತವಿರುವ ಮತ್ತು ಇಂಟರಾಕ್ಟಿವ್ PC ಟೂಲ್ ನಿಮ್ಮ ವಿದ್ಯಾರ್ಥಿಗಳಿಗೆ ಕಲ್ಪನಾತ್ಮಕವಾಗಿರಲು ನೆರವಾಗುತ್ತದೆ ಹಾಗೂ ಹೆಚ್ಚು ಹೆಚ್ಚು ವಿಚಾರಗಳನ್ನು ಓದಲು ಅವರನ್ನು ಪ್ರೋತ್ಸಾಹಿಸುತ್ತದೆ. ಈ ಟೂಲ್ ನ ಅತ್ಯುತ್ತಮ ಅಂಶವೆಂದರೆ ತಮ್ಮೊಳಗಿನ ಕತೆಗಾರರನನ್ನು ಪ್ರವಹಿಸಲು ಸಂಪೂರ್ಣ ಸೃಜನಾತ್ಮಕ ಸ್ವಾತಂತ್ರ್ಯವನ್ನು ಮಕ್ಕಳು ಪಡೆದುಕೊಳ್ಳುತ್ತಾರೆ.

ನಿಮ್ಮ ತರಗತಿಯು ಓದುವಂತೆ ಮಾಡಲು ಕೆಲಸವೊಂದನ್ನು ನೀವು ಈಗ ಹೊಂದಿರುವುದರಿಂದ, ಅವರನ್ನು ಹುರಿದುಂಬಿಸಲು PC ಯೊಂದನ್ನೂ ಸಹ ಬಳಸಿ!