ಕಂಠಪಾಠದ ಮೂಲಕ ಕಲಿಯುವುದು ಎಂದರೇನು?

ಕಂಠಪಾಟ ಕಲಿಯುವಿಕೆ ಅಥವಾ ಉರು ಹೊಡೆಯುವುದು ಎಂದರೆ ವಿಷಯದ ಕಲ್ಪನೆಯಿಲ್ಲದೇ ಮತ್ತು ಭಾವಾರ್ಥವನ್ನು ಅರ್ಥಮಾಡಿಕೊಳ್ಳದೆಯೇ ಸತತವಾಗಿ ಪುನರಾವರ್ತನೆಯ ಮೂಲಕ ಕಲಿಯುವುದು ಅಥವಾ ನೆನಪಿನಲ್ಲಿಟ್ಟುಕೊಳ್ಳುವುದು ಎಂದರ್ಥ....

ಇದರ ಬಗ್ಗೆ ಆಲೋಚಿಸಿ.

ನಾವು ಕಂಠಪಾಟ ಮಾಡುವ ಮೂಲಕ ಇತಿಹಾಸವನ್ನು ಕಲಿತಿದ್ದೇವೆ ಆದರೆ ಅದು ಪ್ರಸ್ತುತ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಆ ಘಟನೆಗಳ ಪ್ರಭಾವವೇನು ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ನಾವು ಭೌತ ಶಾಸ್ತ್ರದ ನಿಯಮಗಳನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತೇವೆ ಆದರೆ ಅವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಗೊಂದಲವನ್ನು ಉಳಿಸಿಕೊಳ್ಳುತ್ತೇವೆ.

ಕಲಿಯುವುದರ ಬದಲಾಗಿ ನಾವು ಕಂಠಪಾಟ ಮಾಡುವುದಕ್ಕೆ ಉತ್ತೇಜನವನ್ನು ನೀಡುತ್ತೇವೆ. “ಕಂಠಪಾಟ” ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತಾಗಿದ್ದು ಇದು ನಮ್ಮ ಶಾಲೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಅಂಗಳದಲ್ಲಿ ಹಾಸುಹೊಕ್ಕಾಗಿದೆ. ಇದು ವಿದ್ಯಾರ್ಥಿಗಳಿಗೆ ಹೊರ ಜಗತ್ತಿನಲ್ಲಿ ಜೀವಿಸಲು ಸಿದ್ಧತೆಯನ್ನು ಮಾಡಿಕೊಡುವುದಿಲ್ಲ, ಥಿಯರಿಗಳನ್ನು ಮತ್ತು ಕಲ್ಪನೆಗಳನ್ನು ಅಳವಡಿಸಲು ಅವಕಾಶ ನೀಡುವುದಿಲ್ಲ ಹಾಗೂ ಸಂಕೀರ್ಣ ಆಲೋಚನೆಯ ಕೌಶಲ್ಯಗಳಲ್ಲಿ ಕೊರತೆಯನ್ನು ಉಂಟುಮಾಡುತ್ತದೆ.

ಇದಷ್ಟೇ ಅಲ್ಲ, ಕಂಠಪಾಟವು ಅಭ್ಯಾಸ ಮಾಡುವುದನ್ನು ನೀರಸ, ಅನಾಸಕ್ತಿದಾಯಕ ಮತ್ತು ಸಂಪೂರ್ಣವಾಗಿ ತೊಡಗಿಸಿಕೊಳ್ಳದೇ ಇರುವಂತೆ ಮಾಡುತ್ತದೆ.

ನಾವದನ್ನು ಬದಲಾಯಿಸುವ ಸಮಯ ಬಂದಿದೆ.

ಪಿಸಿ ಸಕ್ರಿಯವಾಗಿರುವ ಕಲಿಕೆಯು ಕಂಠಪಾಟ ಕಲಿಕೆಗೆ ಅತ್ಯಂತ ಹೆಚ್ಚು ಪರಿಣಾಮಕಾರಿಯಾದ ಬದಲಿ ವಿಧಾನವಾಗಿದೆ. ಇದು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದು, ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಅವುಗಲನ್ನು ತರಗತಿ ಕೋಣೆಯ ಹೊರಗೆ ಅಳವಡಿಸಿಕೊಳ್ಳುವಲ್ಲಿ ಬೆಳಕನ್ನು ಚೆಲ್ಲುತ್ತದೆ. ಅದಕ್ಕಿಂತ ಹೆಚ್ಚಾಗಿ ಇದು ಕಲಿಕೆಯನ್ನು ಮೋಜುಭರಿತವನ್ನಾಗಿಸುತ್ತದೆ.

ಮನೆಯಲ್ಲಿ ಮತ್ತು ತರಗತಿ ಕೋಣೆಯಲ್ಲಿ ಪಿಸಿಗಳು ಕಲಿಕೆಯನ್ನು ಸಕ್ರಿಯಗೊಳಿಸುತ್ತವೆ ಮತ್ತು ಕಲಿಕೆಯನ್ನು ಸುಲಭಗೊಳಿಸುತ್ತದೆ ಮತ್ತು ಪ್ರತಿಯೊಬ್ಬರಿಗೂ ಆಕ್ಸೆಸ್ ಮಾಡುವಂತೆ ಮಾಡುತ್ತವೆ. ಅವುಗಳು ಅಂಕಗಳನ್ನು ಗಳಿಸುವುದರ ಬದಲಾಗಿ ಜ್ಞಾನವನ್ನು ಗಳಿಸುವುದರತ್ತ ಹೆಚ್ಚಿನ ಗಮನವನ್ನು ನೀಡುತ್ತವೆ.

ಈ ದಿನವೇ ಬದಲಾವಣೆ ಮಾದಿರಿ. ಸೈನ್ ಅಪ್ ಮಾಡಿ ಮತ್ತು ಕಂಠಪಾಟವಿಲ್ಲದ ಕಲಿಕೆಗೆ ನಿಮ್ಮ ಬೆಂಬಲ ವ್ಯಕ್ತಪಡಿಸಿ.

ನಾವೆಲ್ಲರೂ ಒಂದಾಗಿ ಸೇರಿ ಕಲಿಕೆಯ ಹೊಸ ಅಲೆಯನ್ನು ’ಆರಂಭ್(ಆರಂಭ)’ ಮಾಡೋಣ.

ಪಿಸಿ ಸಕ್ರಿಯವಾಗಿರುವ ಕಲಿಕೆ.

ನಾನು ಕಂಠಪಾಠ-ರಹಿತ ಕಲಿಯುವಿಕೆಗೆ ಬೆಂಬಲಿಸುತ್ತೇನೆ

ದಯವಿಟ್ಟು ಮಾನ್ಯ ಹೆಸರನ್ನು ನಮೂದಿಸಿ

ದಯವಿಟ್ಟು ಮಾನ್ಯ ಇಮೇಲ್ ನಮೂದಿಸಿ

ರಾಜ್ಯವನ್ನು ಆಯ್ಕೆ ಮಾಡಿ

ನಗರವನ್ನು ಆಯ್ಕೆ ಮಾಡಿ